10/12/2023
ಅಂತರಗಂಗೆ ಬೆಟ್ಟವೆಂಬ ಮಾಯಾಲೋಕ;
ಅಬ್ಬಬ್ಬಾ, ಕೋಲಾರದಲ್ಲಿ ನೋಡಲು ಎಷ್ಟೆಲ್ಲಾ ಇದೆ
📍ಅಂತರಗಂಗೆ, ಕೋಲಾರ.
ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದಿರುವ "ಅಂತರಗಂಗೆ", ಸಮುದ್ರ ಮಟ್ಟದಿಂದ ಸುಮಾರು 4026 ಅಡಿ ಎತ್ತರದಲ್ಲಿ, ಶತ ಶೃಂಗ ಪರ್ವತ ಶ್ರೇಣಿಯಲ್ಲಿದೆ. ಅಂತರಗಂಗೆ, ಸಾಹಸಿಪ್ರಿಯ ಚಾರಣಿಗರಿಗೆ ಭೂಮಿಯ ಮೇಲಿನ ಸ್ವರ್ಗ.
ನೀವು ಬೆಂಗಳೂರು ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿದ್ದೂ ಒಂದು ದಿನ ಟ್ರಿಪ್ ಮಾಡೋಕು ಅನ್ನೋ ಹಂಬಲ ಇದ್ರೆ ನಿಮಗೆ ಬೆಸ್ಟ್ ಜಾಗ ಕೋಲಾರ. ಕೋಲಾರದಲ್ಲಿ ನೋಡಲು ಒಂದಲ್ಲ, ಎರಡಲ್ಲ ಹತ್ತಾರು ಪ್ರವಾಸಿ ತಾಣಗಳಿವೆ. ಧಾರ್ಮಿಕ ಕ್ಷೇತ್ರಗಳು, ಚಾರಣ ಮಾಡಲು ಯೋಗ್ಯ ತಾಣಗಳು, ಚಿನ್ನದ ಗಣಿ ಸೇರಿದಂತೆ ಹತ್ತು ಹಲವು ತಾಣಗಳಿವೆ.
ನೀವು ಕೋಲಾರ ಪ್ರವಾಸ ಮಾಡುವ ಪ್ಲಾನ್ ಇದ್ದರೆ, ನಿಮಗಾಗಿ ಇಲ್ಲಿದೆ ಕೋಲಾರದ ಪ್ರಮುಖ ಪ್ರವಾಸಿತಾಣಗಳ ಪರಿಚಯ
ಅಂತರಗಂಗೆ ಬೆಟ್ಟ:
ಕೋಲಾರ ಪ್ರವಾಸ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಂತರಗಂಗೆ ಬೆಟ್ಟ ಇದು ಕೋಲಾರದಿಂದ 3 ಕಿಲೋಮೀಟರ್ ದೂರದಲ್ಲಿದೆ. ಅಂತರಗಂಗೆ ಬೆಟ್ಟು ಶತಶೃಂಗ ಬೆಟ್ಟಗಳ ಶ್ರೇಣಿಯಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 4026 ಅಡಿ ಎತ್ತರದಲ್ಲಿರುವ ಈ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಈ ಬೆಟ್ಟವು ಕಾಶಿ ವಿಶ್ವೇಶ್ವರ ದೇವಸ್ಥಾನದಿಂದ ಖ್ಯಾತಿ ಪಡೆದಿದೆ. ಈ ಬೆಟ್ಟವನ್ನು ಹತ್ತಿದರೆ ಸಂಪೂರ್ಣ ಕೋಲಾರದ ಅದ್ಭುತ ಸೌಂದರ್ಯವನ್ನು ಸವಿಯಬಹುದು. ಅಂತರಗಂಗೆಯನ್ನು ದಕ್ಷಿಣದ ಕಾಶಿ ಎಂದು ಕರೆಯುತ್ತಾರೆ.
ಮಾರ್ಕಂಡೇಶ್ವರ ಡ್ಯಾಮ್:
ಬೂದಿಕೋಟೆಯಿಂದ 03 ಕಿಲೋಮೀಟರ್ ಹಾಗೂ ಕೋಲಾರದಿಂದ 30 ಕಿಲೋಮೀಟರ್ ದೂರದಲ್ಲಿರುವ ಒಂದು ಅದ್ಭುತ ತಾಣ ಮಾರ್ಕಂಡೇಶ್ವರ ಡ್ಯಾಮ್. ಸರ್ ಎಂ. ವಿಶ್ವೇಶ್ವರಯ್ಯನವರು ಈ ಡ್ಯಾಮ್ ನಿರ್ಮಿಸಿದ್ದರು.
ಬಿಗ್ ರಾಕ್ ಡರ್ಟ್ ಪಾರ್ಕ್:
ಹೊಳಲಿ ಗ್ರಾಮದಲ್ಲಿರುವ ಬಿಗ್‌ರಾಕ್ ಡರ್ಟ್ ಪಾರ್ಕ್ ಒಂದು ಸಮಗ್ರ ತರಬೇತಿ ಅಕಾಡೆಮಿಯಾಗಿದೆ. ಭಾರತದ ಅತ್ಯಂತ ಯಶಸ್ವಿ ಮತ್ತು ಬೇಡಿಕೆಯ ಆಫ್ ರೋಡ್ ತರಬೇತಿ ಇಲ್ಲಿ ಸಿಗುತ್ತದೆ ಅಕಾಡೆಮಿ ಇಲ್ಲಿಯವರೆಗೆ 1500 ರೈಡರ್‌ಗಳಿಗೆ ತರಬೇತಿ ನೀಡಿದೆ.
ಧಾರ್ಮಿಕ ಕ್ಷೇತ್ರಗಳು
ಕೋಲಾರಮ್ಮ ದೇವಸ್ಥಾನ: ಕೋಲಾರ ಪಟ್ಟಣದ ಪ್ರಧಾನ ದೇವತೆ
ಕೋಲಾರಮ್ಮ ಗಂಗರ ಕಾಲಕ್ಕೂ ಹಿಂದೆ ಈ ದೇವಾಲಯವನ್ನು ಕಟ್ಟಿಸಲಾಗಿತ್ತು ಎನ್ನಲಾಗುತ್ತದೆ. ಹಲವು ವೈಶಿಷ್ಟವನ್ನು ಹೊಂದಿರುವ ಈ ದೇವಾಲಯಗಳು ಬೆಂಕಿಯಿಂದ ತುಂಬಿವೆ ಮತ್ತು ವಿಕಿಜವಂಶದಿಂದ ಆವೃತವಾಗಿವೆ ಕಯ್ತುಂಬಿಕೊಳ್ಳಬಹುದು.
ಸೋಮೇಶ್ವರ ದೇವಾಯಲ: ಇದು ಕೋಲಾರಮ್ಮ ದೇವಸ್ಥಾನದ
ಸಮೀಪದಲ್ಲೇ ಇದೆ. ಸೋಮೇಶ್ವರ ದೇವಾಲಯವು ವಿಜಯನಗರ ಪೂರ್ವ ದ್ರಾವಿಡ ಶೈಲಿ ಅಥವಾ ಚೋಳರ ಕಾಲದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಸೊಬಗಿನ
ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಕೋಟಿಲಿಂಗೇಶ್ವರ:
ಕೋಲಾರದ ಪ್ರಮುಖ ದೇವಾಯಲಗಳಲ್ಲಿ
ಕೋಟಿಲಿಂಗೇಶ್ವರ ಕೂಡ ಒಂದು ಇದು ಕೋಲಾರದಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ. ಕಮ್ಮಸಂದ್ರ ಎಂಬ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಸುಮಾರು 1 ಕೋಟಿಯಷ್ಟು ಚಿಕ್ಕ ದೊಡ್ಡ ಶಿವನ విగ్రæగళిచే. ఇల్లి 108 అని ఎత్తరద శివలింగవిద్ద్చు, ఇదు ಪ್ರಪಂಚದಲ್ಲೇ ಅತೀ ಎತ್ತರದ ಶಿವಲಿಂಗ ಎಂದು ಹೇಳಲಾಗುತ್ತದೆ. 35 ಅಡಿ ಎತ್ತರದ ನಂದಿ ವಿಗ್ರಹವನ್ನೂ ಇಲ್ಲಿ ಕಣ್ಣುಂಬಿಕೊಳ್ಳಬಹುದು.
📍ಅಂತರಗಂಗೆ, ಕೋಲಾರ. ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದಿರುವ "ಅಂತರಗಂಗೆ", ಸಮುದ್ರ ಮಟ್ಟದಿಂದ ಸುಮಾರು 4026 ಅಡಿ ಎತ್ತರದಲ್ಲಿ, ಶತ ಶೃಂ....