06/08/2025
*ಒಳಗಿನ ಸತ್ಯ.*
ಒಬ್ಬ ಯುವ ಸನ್ಯಾಸಿ, ಒಬ್ಬ ಮಾರ್ಗದರ್ಶಿಯ ಹುಡುಕಾಟದಲ್ಲಿ ಅಲೆಯುತ್ತಿದ್ದ. ಯಾರಾದರೂ ನನಗೆ ಪ್ರೇರಣೆ ನೀಡಬಹುದು, ಬದುಕಿನ ಮಾರ್ಗವನ್ನು ತೋರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ. ಅಂತೂ ಅವನಿಗೊಬ್ಬ ವೃದ್ಧ ಸನ್ಯಾಸಿ ಸಿಕ್ಕರು. ಆತ ಆ ವೃದ್ಧ ಸನ್ಯಾಸಿಯೊಂದಿಗೆ ಸಹಯಾತ್ರಿಯಾದ.
ಆ ವೃದ್ಧ ಸನ್ಯಾಸಿ, ತನ್ನ ಜೊತೆ ಬರಲು ಇವನಿಗೊಂದು ಶರತ್ತನ್ನು ಒಡ್ಡಿದ. ಅದಂದರೆ, ನಾನು ಏನೇ ಮಾಡಿದರೂ, ನೀನು ಆ ಸಂದರ್ಭದಲ್ಲಿ , ಏನೂ ಕೇಳದೇ, ಸುಮ್ಮನೆ ಇರಬೇಕು.ಹೀಗೆ ಯಾಕೆ ಎಂದು ಪ್ರಶ್ನೆಗಳನ್ನು ಕೇಳಬಾರದು. ನಾನು ಏನೇ ಮಾಡಿದರೂ, ಅದನ್ನು ನಿನಗೆ ಹೇಳುವುದಿಲ್ಲ . ನೀನೇನಾದರೂ ಪ್ರಶ್ನೆ ಕೇಳಿದರೆ, ನೀನು ನನ್ನ ಜೊತೆ ಬರುವ ಹಾಗಿಲ್ಲ. ಇದಕ್ಕೆ ನಿನ್ನ ಸಮ್ಮತಿ ಇದ್ದರೆ ನೀನು ನನ್ನ ಜೊತೆ ಬರಬಹುದು ಎಂದು ಹೇಳಿದ. ಯುವ ಸನ್ಯಾಸಿ ಇವನ ಶರತ್ತನ್ನು ಒಪ್ಪಿಕೊಂಡ .
. ನಂತರ ಅವರಿಬ್ಬರು ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಮೊದಲ ರಾತ್ರಿ ಒಂದು ನದಿಯ ತೀರದಲ್ಲಿ ಮಲಗಿ ಬೆಳಗ್ಗೆ ಎದ್ದು ಆ ನದಿಯಲ್ಲಿ ಕಟ್ಟಲಾಗಿದ್ದ ದೋಣಿಯಲ್ಲಿ ಕುಳಿತು ನದಿಯನ್ನು ದಾಟ ತೊಡಗಿದರು. ಅಂಬಿಗನು ಅವರು ಸನ್ಯಾಸಿಗಳೆಂದು ತಿಳಿದು, ಅವರಿಂದ ಕಾಸು ತೆಗೆದುಕೊಳ್ಳದೇ, ಉಚಿತವಾಗಿ ದಾಟಿಸತೊಡಗಿದ. ನದಿಯನ್ನು ದಾಟುತ್ತಿರುವಾಗಲೇ, ವೃದ್ಧ ಸನ್ಯಾಸಿ, ಕದ್ದು ಮುಚ್ಚಿ ಅಂಬಿಗನಿಗೆ ಕಾಣದಂತೆ ,ಆ ದೋಣಿಯಲ್ಲಿ ಒಂದು ದೊಡ್ಡ ರಂಧ್ರವನ್ನು ಕೊರೆಯ ತೊಡಗಿದ. ಇದನ್ನು ಗಮನಿಸಿದ ಯುವ ಸನ್ಯಾಸಿಗೆ ಇದೇನು ಇವರು ಹೀಗೆ ಮಾಡುತ್ತಿದ್ದಾರೆ , ಎಂದು ಆಶ್ಚರ್ಯವಾಯಿತು. ಪಾಪ, ಈ ಅಂಬಿಗ ಮಾಡಿದ ಉಪಕಾರಕ್ಕೆ ಇದೇ ನಾವು ಕೊಡುವ ಕಾಣಿಕೆಯೇ, ಎಂದು ಅವನಿಗೆ ಅನಿಸಿತು. ಆತ ಇವರನ್ನು ಉಚಿತವಾಗಿ ನದಿ ದಾಟಿಸಿದ್ದ.ನದಿ ದಾಟಿ ಇನ್ನೂ ಕೆಳಕ್ಕೆ ಇಳಿದು ಎರಡು ಹೆಜ್ಜೆ ನೆಡೆದಿಲ್ಲ, ಅಷ್ಟರಲ್ಲೇ ಯುವಕನಿಗೆ ಆತನಿಗೆ ನೀಡಿದ ಶರತ್ತಿನ ವಿಚಾರ ಮರೆತು ಹೋಯಿತು.
ಯುವ ಸನ್ಯಾಸಿ, ವೃದ್ಧ ಸನ್ಯಾಸಿಯನ್ನು ಕೇಳಿಯೇ ಬಿಟ್ಟ. ನೀವು ಒಬ್ಬ ಸನ್ಯಾಸಿಯಾಗಿ ನೀವು ಮಾಡಿದ ಕೆಲಸ ನೋಡಿ ನನಗೆ ತುಂಬಾ ಬೇಸರವಾಗುತ್ತಿದೆ, ಆ ಅಂಬಿಗ ನಮ್ಮನ್ನು ಎಷ್ಟು ಪ್ರೀತಿಯಿಂದ ಉಚಿತವಾಗಿ ಬೆಳಗಿನ ಜಾವದಲ್ಲಿ ನದಿ ದಾಟಿಸಿದ. ಆದರೆ ನೀವು ಆತನ ದೋಣಿಯಲ್ಲಿ ರಂದ್ರ ಕೊರೆದದ್ದು , ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವನು ಮಾಡಿದ ಉಪಕಾರಕ್ಕೆ ನೀವು ಮಾಡಿದ್ದು ಸರಿಯೇ ಎಂದು, ಕೇಳಿದ.
ವೃದ್ಧಸನ್ಯಾಸಿ , ನೀನು ಶರತ್ತನ್ನು ಮುರಿದೆ, ನಾನು ನಿನಗೆ ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಹೇಳಿದ್ದನ್ನು ಮರೆತುಬಿಟ್ಟೆಯಾ? ಇನ್ನು ನೀನು ನನ್ನಿಂದ ದೂರ ಹೊರಟುಬಿಡು, ನೀನು ಹೊರಡುವುದೇ ಆದರೆ, ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಕೇಳಿಸಿಕೋ, ಒಂದು ವೇಳೆ ನನ್ನ ಜೊತೆಯಲ್ಲಿ ಬರುವೆಯಾದರೆ, ಈ ಸಲ ಕ್ಷಮಿಸುತ್ತೇನೆ, ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ.
ಯುವ ಸನ್ಯಾಸಿಗೆ ತನ್ನ ತಪ್ಪಿನ ಅರಿವಾಯಿತು, ಆತ ಕ್ಷಮೆ ಕೇಳಿದ. ತನ್ನಿಂದ ಇಷ್ಟು ಸಂಯಮದಿಂದ ಇರಲು ಸಾಧ್ಯವಾಗಲಿಲ್ಲವಲ್ಲ ಎಂದು ಆತನಿಗೆ ಬೇಸರವಾಯಿತು.
ಆದರೆ ಮಾರನೇ ದಿನ ಅವನ ಸಂಯಮ ಮುರಿಯುವಂತಹ ಒಂದು ಘಟನೆ ಸಂಭವಿಸಿತು. ಅವರು ಒಂದು ಕಾಡಿನಲ್ಲಿ ಹೋಗುತ್ತಿದ್ದಾಗ, ಆ ರಾಜ್ಯದ ರಾಜ ಕಾಡಿನಲ್ಲಿ ಬೇಟೆ ಯಾಡಲು ಬಂದಿದ್ದ. ಆತ ಇವರನ್ನು ನೋಡಿ ತುಂಬಾ ಗೌರವದಿಂದ ನೆಡೆದುಕೊಂಡ. ಅವರೆಲ್ಲರೂ ಕುದುರೆಯಲ್ಲಿ ಕುಳಿತುಕೊಂಡು ಅವರ ರಾಜಧಾನಿಗೆ ಹಿಂತಿರುಗುತ್ತಿದ್ದರು. ರಾಜ ಇವರನ್ನೂ ತನ್ನ ಅರಮನೆಗೆ ಆಹ್ವಾನಿಸಿ,ತನ್ನ ಏಕಮಾತ್ರ ಪುತ್ರ ಯುವ ರಾಜಕುಮಾರನ ಜೊತೆಯಲ್ಲಿ ವೃದ್ಧ ಸನ್ಯಾಸಿಯನ್ನು ಕುದುರೆಯಲ್ಲಿ ಕೂರಿಸಿದ. ಕುದುರೆಗಳು ಅವರ ರಾಜಧಾನಿಯ ಕಡೆಗೆ ಹೊರಟವು. ರಾಜ ಕೂತಿದ್ದ ಕುದುರೆ ಮುಂದೆ ಓಡುತ್ತಿತ್ತು, ಇಬ್ಬರು ಸನ್ಯಾಸಿಗಳು ಕೂತಿದ್ದ ಕುದುರೆ ಹಿಂದಾಯಿತು. ಸ್ವಲ್ಪ ಸಮಯದ ನಂತರ, ಇಬ್ಬರು ಸನ್ಯಾಸಿಗಳೂ, ಸ್ವಲ್ಪ ದೂರ ದೂರವಾದರು. ಆಗ ವೃದ್ಧ ಸನ್ಯಾಸಿ, ಯಾರು ಹತ್ತಿರದಲ್ಲಿ ಇಲ್ಲದಿರುವುದನ್ನು ಕಂಡು, ಯುವ ರಾಜಕುಮಾರನನ್ನು ಕೆಳಗಿಳಿಸಿ, ಅವನನ್ನು ಚೆನ್ನಾಗಿ ಥಳಿಸಿ, ಅವನ ಕೈ ತಿರುಚಿ ಮುರಿದುಬಿಟ್ಟ. ನಂತರ, ಯುವ ಸನ್ಯಾಸಿ ಹತ್ತಿರ ಬಂದ ತಕ್ಷಣ, ಅವನನ್ನು ಕುದುರೆಯಿಂದ ಇಳಿಸಿ, ಅವನನ್ನು ಕರೆದುಕೊಂಡು, ಇಬ್ಬರೂ ಅಲ್ಲಿಂದ ವೇಗವಾಗಿ ಓಡಿಹೋದರು.
ಈ ಘಟನೆಯಿಂದ, ಯುವ ಸನ್ಯಾಸಿಗೆ ಇನ್ನು ತಾಳ್ಮೆಯಿಂದ ಇರಲು ಸಾಧ್ಯವಾಗಲಿಲ್ಲ. ಅವನಿಗೆ ಪುನಃ ವೃದ್ಧ ಸನ್ಯಾಸಿ ಹಾಕಿದ ಶರತ್ತು ಮರೆತು ಹೋಯಿತು. ಅವನ ಮೇಲೆ ಸ್ವಲ್ಪ ಕೋಪವೂ ಬಂತು. ಯಾವ ರಾಜ ನಮ್ಮನ್ನು ಸ್ವಾಗತಿಸಿ, ಆದರಿಸಿ, ಕುದುರೆ ಸವಾರಿಗೆ ಅವಕಾಶ ಕೊಟ್ಟು, ವಿಶ್ವಾಸದಿಂದ ತನ್ನ ಅರಮನೆಗೆ ಬರುವಂತೆ ಆಮಂತ್ರಣವಿತ್ತಿದ್ದನೊ, ನೀವು ಆತನ ಏಕ ಮಾತ್ರ ಪುತ್ರನ ಮೇಲೆ ದಾಳಿ ಮಾಡಿ ಅವನ ಕೈ ಮುರಿದು ಅವನನ್ನು ಕಾಡಿನಲ್ಲೇ ಬಿಟ್ಟು ಬಂದಿದ್ದೀರಿ, ಇದೇನಿದು, ನಿಮ್ಮ ನೀಚ ತನ, ನನಗೆ ಇದಕ್ಕೆ ಉತ್ತರ ಬೇಕೇ ಬೇಕು ಎಂದು ಹೇಳಿದ.
ವೃದ್ಧಸನ್ಯಾಸಿ, ಮತ್ತೆ ನೀನು ನನ್ನ ಶರತ್ತನ್ನು ಮುರಿದೆ, ಇನ್ನು ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ, ನೀನಿನ್ನು ಹೊರಡಬಹುದು, ಹಾಗೂ ನಿನ್ನ ಎರಡೂ ,ಪ್ರಶ್ನೆಗಳಿಗೆ ಈಗ ಉತ್ತರ ತಿಳಿದು ಕೊಂಡು ಹೊರಡು, ಎಂದು ಹೇಳಿದ.
ನಿನ್ನ ಮೊದಲೇ ಪ್ರಶ್ನೆ, ಆ ದೋಣಿ ಮತ್ತು ಅಂಬಿಗ.
ಆ ಅಂಬಿಗ ನದಿ ದಡದಲ್ಲಿ ರಾತ್ರಿ ಕಳೆಯಬೇಕಾಗುತ್ತದೆ. ದರೋಡೆಕೋರರು, ಒಂದು ಹಳ್ಳಿಯಲ್ಲಿ ದರೋಡೆ ಮಾಡುವುದಕ್ಕಾಗಿ, ಇದೇ ದೋಣಿಯನ್ನು ಬಳಸಿಕೊಂಡು ನದಿಯನ್ನು ದಾಟಿ ದರೋಡೆ ಮಾಡುವ ತಯಾರಿ ನಡೆಸಿದರು. ಅದರ ಸುಳಿವು ನನಗೆ ಗೊತ್ತಾಗಿ,ಆ ದೋಣಿಯಲ್ಲಿ ದೊಡ್ಡ ರಂದ್ರ ಕೊರದು ಬಿಟ್ಟೆ. ಆ ದೋಣಿಯಲ್ಲಿ ಅವರು ನದಿಯನ್ನು ದಾಟಲು ಸಾಧ್ಯವಿಲ್ಲ. ಆ ಹಳ್ಳಿಯನ್ನು, ನಾನು ಡಕಾಯಿತರಿಂದ ಉಳಿಸಿದೆ.